ಕ್ರೀಡೆಯಿಂದ ಮಾನಸಿಕ ಸದೃಡತೆ ವೃದ್ಧಿ
ನಂಜನಗೂಡು ; ಸದಾ ಸುದ್ದಿ ಸಮಾಚಾರಗಳ ಗುಂಗಿನಲ್ಲಿ ದಿನ ಕಳೆಯುವ ಪತ್ರಕರ್ತರು ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ, ಮಾನಸಿಕವಾಗಿ ಸದೃಢರಾಗಿರಬಹುದು ಎಂದು ಮೂಳೆ ಮತ್ತು ಕೀಲು ತಜ್ಞ ವೈದ್ಯ ಡಾ.ಶ್ರೀಕಾಂತ್ ಸುಂದರೇಶ್ ಹೇಳಿದರು. ನಗರದ ಸಿಟಿಜನ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದ ಹಾಗೂ ಹೋಗುಗಳ ಬಗ್ಗೆ ಸದಾ ಸುದ್ದಿ, ಸಮಾಚಾರದ ಒತ್ತಡದಲ್ಲಿ ದಿನ ಕಳೆಯುವ ಪತ್ರಕರ್ತರಿಗೆ…