ದಸರಾ ದೀಪಾಲಂಕಾರ ಹೊಸತನದಿಂದ ಕೂಡಿರಲಿ : ಇಂಧನ ಸಚಿವ ಕೆ.ಜೆ.ಜಾರ್ಜ್
ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮಾಡಲಾಗುವ ದೀಪಾಲಂಕಾರ ಕಳೆದ ಬಾರಿಗಿಂತಲೂ ಹೆಚ್ಚು ಆಕರ್ಷಕ ಹಾಗೂ ಹೊಸತನದಿಂದ ಕೂಡಿರಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶುಕ್ರವಾರ ಮೈಸೂರಿನ ಕಡಕೊಳದಲ್ಲಿರುವ ಕರ್ನಾಟಕ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ 2026ನೇ ಸಾಲಿನ ದಸರಾ ಆಚರಣೆಯ ವಿವಿಧ ಕಾರ್ಯಕ್ರಮಗಳ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,“ಕಳೆದ ಬಾರಿ ದಸರಾ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ಅದಕ್ಕಿಂತಲೂ ವಿಭಿನ್ನವಾಗಿ ಹಾಗೂ ಆಕರ್ಷಕವಾಗಿ ದೀಪಾಲಂಕಾರ ರೂಪಿಸಬೇಕು. ದಸರಾಕ್ಕೆ…