ದೇವಾಲಯ ಕಟ್ಟದಿದ್ದರು,ವಿದ್ಯಾಲಯ ಕಟ್ಟಬೇಕು; ಸದ್ಗುರು ಶ್ರೀ ಮಧುಸೂಧನ ಸಾಯಿ
ನಂಜನಗೂಡು:ದೇವಾಲಯ ಕಟ್ಟದಿದ್ದರು, ವಿದ್ಯಾಲಯ ಕಟ್ಟಬೇಕು ಎಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಒನ್ ವರ್ಲ್ಡ್ಒನ್ ಫ್ಯಾಮಿಲಿ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂಧನ ಸಾಯಿ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾನವನಾಗಿ ಹುಟ್ಟಿದ ಮೇಲೆ ಸದ್ಗುರುವಿನ ಸಾನ್ನಿಧ್ಯದಿಂದ ಮೋಕ್ಷಪಡೆಯುವುದು ಜೀವನದ ಮಹಾಭಾಗ್ಯವಾಗಿದೆ.ಸುತ್ತೂರಿನ ಪರಮಪೂಜ್ಯ ಶ್ರೀಗಳವರು ಮಾತೃ ಹೃದಯಿಗಳು.ಪೂಜ್ಯರ ಆಶೀರ್ವಾದ ಪಡೆದಿರುವ ನೀವುಗಳೇ ಧನ್ಯರು,ಅದನ್ನುಸಮರ್ಪಕವಾಗಿ ಬಳಸಿಕೊಂಡು ಬದುಕಿನಲ್ಲಿ ಸಾಧನೆಯೆಡೆಗೆನಡೆಯಬೇಕು ಎಂದು ತಿಳಿಸಿದರು.ಅಲ್ಲಮಪ್ರಭುಗಳು ಹೇಳಿದಂತೆ ದೀಪ, ಬತ್ತಿಯಿದ್ದರೂ,ತೈಲವಿಲ್ಲದೆ ಹಣತೆಯು ಹೇಗೆ ಪ್ರಕಾಶಿಸುವುದಿಲ್ಲವೊ,ಹಾಗೆ ಅಂತರAಗದ ಭಕ್ತಿಜಾಗೃತವಾಗದಿದ್ದರೆ, ಸಾಧನೆಯ…