Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ಹೆಚ್ .ಡಿ. ಕೋಟೆ ವಕೀಲರ ಸಂಘದ ನೂತನ ಅದ್ಯಕ್ಷ ರಿಗೆ ಸನ್ಮಾನ

ಮೈಸೂರು; ಹೆಚ್ .ಡಿ. ಕೋಟೆ ವಕೀಲರ ಸಂಘದ ನೂತನ ಅದ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ರವರನ್ನು ಮೈಸೂರು ವಕೀಲರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.  ಈ ವೇಳೆ ಎಂ ಮಹದೇವಸ್ವಾಮಿ,ಸಿ.ನಾಗರಾಜ್, ಸನತ್ ಕುಮಾರ್,ಪಡುವಾರಹಳ್ಳಿ ಎಂ ರಾಮಕೃಷ್ಣ,ಮಂಜು ಲುಮಾರ್,ಸಿದ್ದೇಗೌಡ,ರವಿ,ಬಸವರಾಜು, ಜಗದೀಶ್ ತಿಮ್ಮಾಚಾರಿ,ಮಣಿಕಂಠ,ಮಧು,ರಾಜೇಶ್ ರವರಿದ್ದರು.

Read More

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಹಯೋಗ

ಮೈಸೂರು: ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಸಿ.ಸಿ.ಎಸ್.ಆರ್ ನಿಧಿಯನ್ನು ಬಳಸಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ. ಉದಯಕುಮಾರ್ ಅವರು ಪ್ರಸಕ್ತ ಯೋಜನೆಯ ಮುಖ್ಯ ಉದ್ದೇಶಗಳು ಹಾಗೂ ಈ ಯೋಜನೆಯ ಭಾಗವಾಗಿ ಸ್ಥಾಪನೆ ಮಾಡಬೇಕಾಗಿರುವ ಸಿ.ಸಿ.ಎಸ್.ಆರ್ ಕೋಶ ಹಾಗೂ ನಮ್ಮ…

Read More

ಜುಲೈ 10 ರಂದು ಮಹಾತ್ಮನ ಮಗಳು’ ಪುಸ್ತಕದ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮಮೈಸೂರು; ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯವರಿAದ ಮೀರಾ ಬೆಹನ್ ಯಾನೆ ಮೀರಕ್ಕ ಎಂದು ಕರೆಯಲ್ಪಡುವ ಮೆಡಿಲಿನ್ ಸ್ಲೇಡ್ ಅವರ ಆತ್ಮ ಕಥೆಯ ಕನ್ನಡ ಅನುವಾದ ‘ಮಹಾತ್ಮನ ಮಗಳು’ ಪುಸ್ತಕದ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವನ್ನು ಜುಲೈ 10 ರಂದು ಹಮ್ಮಿಕೊಳ್ಳಲಾಗಿದೆ. ಕನ್ನಡಕ್ಕೆ ಈ ಪುಸ್ತವನ್ನು ಮುಂಜುನಾಥ್ ಚಾಂದ್ ಅವರು ಅನುವಾದಿಸಿದ್ದಾರೆ.ಗಾಂಧೀಜಿಯವರು ತಮ್ಮ ಮಗಳೆಂದೇ ಸ್ವೀಕರಿಸಿದ ಈ ವಿದೇಶಿ ಮಹಿಳೆಯ ಅನುಭವದ ಮೂಸೆಯಲ್ಲಿ ಗಾಂಧೀಜಿಯವರು, ಆಪ್ತವಾಗಿ,…

Read More

30 ಪ್ರಕರಣ ಭೇದಿಸಿದ ಪೊಲೀಸರಿಂದ 35 ಆರೋಪಿಗಳ ಬಂಧನ, 1.55 ಕೋಟಿ ರೂ ಮೌಲ್ಯದ ವಸ್ತುಗಳು ವಶ

ಮೈಸೂರು : ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ದರೋಡೆ, ಮನೆಗಳ್ಳತನ, ಬೈಕ್ ಕಳ್ಳತನ ಪ್ರಕರಣ ಸೇರಿ 30 ಪ್ರಕರಣಗಳನ್ನು ಭೇದಿಸಿರುವ ಮೈಸೂರಿನ ಪೊಲೀಸರು 35 ಆರೋಪಿಗಳನ್ನು ಬಂಧಿಸಿ, 1.55 ಕೋಟಿ ರೂ ಮೌಲ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದರು.ಬುಧವಾರ ನಗರದ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರಿAದ 1,55,12,300 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಇದೇ ತಿಂಗಳ 1ರಂದು ವ್ಯಾಪಾರಿಯೊಬ್ಬರು ಚಿನ್ನ ಮಾರಿ 85 ಲಕ್ಷ ರೂ.ನ್ನು ಎರಡು…

Read More

ಮತದಾನದ ಹಕ್ಕನ್ನು ಕಸಿಯುವ ಹುನ್ನಾರ: ಎಂ.ಲಕ್ಷ್ಮಣ್

 ​ಪಿರಿಯಾಪಟ್ಟಣ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು. ಪಟ್ಟಣದ ಅಭಯ್ ಕನ್ವೆಸನಲ್ ನಲ್ಲಿ ನಡೆದ ಪಿರಿಯಾಪಟ್ಟಣ ವಿಭಾಗ ಮಟ್ಟದ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಬೂತ್ ಮಟ್ಟದ ಪ್ರತಿನಿಧಿಗಳ (ಬಿಎಲ್ಎ) ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಸ್ಐಆರ್  ಪ್ರಕ್ರಿಯೆಗೆ ನಮ್ಮ ವಿರೋಧವಿಲ್ಲ, ಜನರ ಮತದಾನದ ಹಕ್ಕನ್ನು ರಕ್ಷಣೆ ಮಾಡುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಅದಕ್ಕಾಗಿ ದೇಶದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲು ಸಭೆಗಳನ್ನು ನಮ್ಮ ಪಕ್ಷ ಹಮ್ಮಿಕೊಳ್ಳುತ್ತಿದೆ, ಆದರೆ…

Read More

ಮಕ್ಕಳ ಗ್ರಾಮ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಿ: ಐಶ್ವರ್ಯ ಆರ್

ಮೈಸೂರು: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯು ಗ್ರಾಮ ಮಟ್ಟದಿಂದ ನಡೆಯಬೇಕು. ಮಕ್ಕಳ ಗ್ರಾಮ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ತಿಳಿಸಿದರು.ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಹಾಗೂ ಕಾರ್ಯಪಡೆ ಸಮಿತಿಯ ಸಭೆ ನಡೆಸಿ ಮಾತನಾಡಿದ ಅವರು, ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪ್ರತಿ ಮಾಹೆ ನಿಗದಿಪಡಿಸಿರುವ ಕನಿಷ್ಠ 15 ತಪಾಸಣೆ ಅಥವಾ ದಾಳಿಗಳನ್ನು ನಡೆಸಿ…

Read More

ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ವಲಯ:ಆಷಾಢ ಮಾಸದಲ್ಲಿ ಪ್ಲಾಸ್ಟಿಕ್ ಬಳಸದಂತೆ ಭಕ್ತರಿಗೆ ಪ್ರಾಧಿಕಾರ ಸೂಚನೆ

ಮೈಸೂರು: ನಗರದ ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ವಲಯವಾಗಿದೆ. ಈ ಹಿನ್ನಲೆಯಲ್ಲಿ ಆಷಾಢ ಮಾಸದ ಶುಕ್ರವಾರಗಳು, ಪ್ರತಿ ಶನಿವಾರ, ಭಾನುವಾರ ಹಾಗೂ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವದ /ವರ್ಧಂತಿ ಪ್ರಯುಕ್ತ ಚಾಮುಂಡಿಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ, ಇಡೀಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಶ್ರೀ ಚಾಮುಂಡೇಶ್ವರಿಕ್ಷೇತ್ರಅಭಿವೃದ್ಧಿ ಪ್ರಾಧಿಕಾರವು ತೀರ್ಮಾನಿಸಿದೆ.ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯ ತೀರ್ಮಾನದಂತೆ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಭಕ್ತಾದಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಅರಿವು ಮೂಡಿಸಲು ಉದ್ದೇಶಿಸಲಾಗಿದೆ.ಈ ಬಾರಿಯ…

Read More

ನಗರ ಪಾಲಿಕೆ ಆಯುಕ್ತರಾಗಿ ಎಂ.ಕೆ.ಸವಿತಾ ಅಧಿಕಾರ ಸ್ವೀಕಾರ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಎಂ.ಕೆ.ಸವಿತಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಇಂದು ಅಧಿಕಾರ ವಹಿಸಿಕೊಂಡು, ನಗರ ಆಯುಕ್ತರಾಗಿದ್ದ ಶೇಖ್ ತಸ್ವೀರ್ ಆಸಿಫ್ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾ ಗಿದ್ದ ಎಂ.ಕೆ. ಸವಿತಾ ಅವರನ್ನು ಆಯುಕ್ತರ ಹುದ್ದೆಗೆ ನೇಮಿಸಲಾಗಿದೆ. ಅವರು ನಗರಪಾಲಿಕೆಯ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಶೇಖ್ ತಸ್ವೀರ್ ಆಸಿಫ್ ಅಧಿಕಾರ ಹಸ್ತಾಂತರಿಸಿದರು. ಸವಿತಾ ಅವರು ಈ ಹಿಂದೆ ತಿ.ನರಸೀಪುರ ತಾಲ್ಲೂಕು…

Read More

ಅಸಹಾಯಕರಾಗಿ ಬಿದ್ದಿದ್ದ ವೃದ್ಧೆಯ ರಕ್ಷಣೆ

ಮೈಸೂರು; ನಗರದ ಪೊಲೀಸ್ ಆಯುಕ್ತರ ಕಚೇರಿ ಬಳಿ ಅಸಹಾಯಕರಾಗಿ ಬಿದ್ದಿದ್ದ ನಿಂಗಮ್ಮ ಎಂಬ ವಯೋವೃದ್ಧೆಯನ್ನು `ಅಕ್ಕ ಪಡೆ’ಯ ಸಿಬ್ಬಂದಿಗಳು ತಕ್ಷಣವೇ ರಕ್ಷಿಸಿದ್ದಾರೆ. ಬಳಿಕ ಅವರನ್ನು ವಿಚಾರಿಸಿದಾಗ, ಅವರು ರೈಲ್ವೆ ಇಲಾಖೆಯ ನಿವೃತ್ತ ನೌಕರರೆಂದೂ ಮತ್ತು ಅವರ ಮನೆ ವೀರನಗೆರೆ ಬಳಿ ಇರುವುದಾಗಿಯೂ ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಕ್ಕ ಪಡೆಯ ಸಿಬ್ಬಂದಿ ವೃದ್ಧೆಯನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

Read More