ಅಂಬಾ ವಿಲಾಸ ಅರಮನೆಯಲ್ಲಿ ರಾಜಮನೆತನದವರ ಖಾಸಗಿ ದರ್ಬಾರ್ ಆರಂಭಕ್ಕೆ ಸಿದ್ಧತೆ
ಮೈಸೂರು: ವಿಶ್ವ ಪ್ರಸಿದ್ಧ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಅ.11 ರಿಂದ ರಾಜ ವಂಶಸ್ಥರು ನವರಾತ್ರಿ ಆಚರಣೆ, ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಆ ಮೂಲಕ ಖಾಸಗಿಯಾಗಿ ದಸರಾ ಆಚರಣೆ ಮಾಡಲಿದ್ದಾರೆ.ಚಾಮುಂಡಿಬೆಟ್ಟದ ಸಂಪ್ರದಾಯದAತೆ ರಾಜ ಮನೆತನದವರು ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಿದ್ದಾರೆ.ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಅಕ್ಟೋಬರ್ 5ರಂದು ಜೋಡಣೆಯಾದ ರತ್ನಖಚಿತ ಸಿಂಹಾಸನಕ್ಕೆ ಅಕ್ಟೋಬರ್ 11ರ ಬೆಳಗ್ಗೆ 6 ಗಂಟೆಯಿAದ 7:12 ನಿಮಿಷದ ನಡುವೆ ಸಿಂಹ ಜೋಡಣೆ ಮಾಡಲಾಗುತ್ತದೆ. ನಂತರ ರತ್ನಖಚಿತ ಪೀಠವು ಸಿಂಹಾಸನ ಸಿದ್ಧವಾಗುತ್ತದೆ. ಬಳಿಕ ರಾಜವಂಶಸ್ಥರಾದ ಸಂಸದ…