ಕೇರಳ ರಾಜ್ಯದ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶ ಅಧಿಕೃತವಾಗಿ ಮೈಸೂರು ವಿಭಾಗಕ್ಕೆ ಸೇರ್ಪಡೆ
ಮೈಸೂರು; ಕೇರಳ ರಾಜ್ಯದ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಗುರುವಾರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಎಡಿಆರ್ಎಂ ಶಮ್ಮಾಸ್ ಹಮೀದ್ ಅವರು ವ್ಯವಸ್ಥೆಗಳನ್ನು ಪರಿಶೀಲಿಸಿ, ಸುಗಮ ವರ್ಗಾವಣೆ ಹಾಗೂ ರೈಲು ಕಾರ್ಯಾಚರಣೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಲು ಅಗತ್ಯ ಕ್ರಮಗಳನ್ನು ಕೈಗೊಂಡರು.ಮೈಸೂರು ವಿಭಾಗದ ಇತರ ಶಾಖಾಧಿಕಾರಿಗಳೊಂದಿಗೆ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಮತ್ತು ಜೋಕಟ್ಟೆ ಸೇರಿದಂತೆ ಮಂಗಳೂರು ಪ್ರದೇಶದ ಪ್ರಮುಖ ರೈಲು ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯಾಚರಣಾ…