ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದ ಪೌರ ಕಾರ್ಮಿಕರು
ಮೈಸೂರು: ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರು ದಿನನಿತ್ಯದ ಕೆಲಸದ ಒತ್ತಡ, ಜಂಜಾಟ ಹಾಗೂ ದೈಹಿಕ ಶ್ರಮವನ್ನು ಕೆಲಕಾಲ ಮರೆತು, ಪೌರ ಕಾರ್ಮಿಕರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.ಮೈಸೂರು ನಗರ ಪಾಲಿಕೆಯ ವತಿಯಿಂದ ನಗರದ ಒವಲ್ ಮೈದಾನದಲ್ಲಿ ಪೌರ ಕಾರ್ಮಿಕ ಸಿಬ್ಬಂದಿಗಾಗಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.ಮಹಿಳಾ ಪೌರ ಕಾರ್ಮಿಕರಿಗಾಗಿ ಹಗ್ಗ ಜಗ್ಗಾಟ, ಲೆಮನ್ ಸ್ಪೂನ್, ಥ್ರೋಬಾಲ್ ಹಾಗೂ ಬ್ಯಾಸ್ಕೆಟ್ಬಾಲ್ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಮಹಿಳಾ ಪೌರ ಕಾರ್ಮಿಕರು,…