ವಿಶ್ವ ಪರಿಸರ ದಿನ ಅಂಗವಾಗಿ ಸೋಲಾರ್ ಇಂಡಕ್ಷನ್ ಸ್ಟೌವ್‌ಗೆ ಚಾಲನೆ ನೀಡಿದ ಶಾಸಕ ಟಿ.ಎಸ್. ಶ್ರೀವತ್ಸ
ಮೈಸೂರು: ಸನ್ ಪ್ರೀತ್ ಸಸ್ಟೆöÊನೆಬಿಲಿಟಿ ಸೊಲ್ಯೊಷನ್ಸ್ ಸಂಸ್ಥೆಯು ವಿನ್ಯಾಸಗೊಳಿಸಿರುವ ಗೃಹ ಬಳಕೆಯ ಸೋಲಾರ್ ಇಂಡಕ್ಷನ್ ಸ್ಟೌವ್ ಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಸಂಪೂರ್ಣ ಸೌರ ಶಕ್ತಿಯಿಂದ ಕಾರ್ಯ ನಿರ್ವಹಿಸುವ ಸೋಲಾರ್ ಇಂಡಕ್ಷನ್ ಸ್ಟೌವ್ ಅನೇಕ ವಿಶೇಷತೆಗಳಿಂದ ಕೂಡಿದ್ದು, ಇದರಲ್ಲಿ ರಾತ್ರಿ ವೇಳೆಯೂ ಸೇರಿದಂತೆ ಮೂರೂ ಹೊತ್ತಿನ ಅಡುಗೆ ಮಾಡಬಹುದಾಗಿದೆ. ಸರಳ ವಿನ್ಯಾಸ ಮತ್ತು ಸುಲಭವಾಗಿ ಬಳಕೆ ಮಾಡಬಹುದಾದ ಮಾದರಿಯಾಗಿರುವ ಈ ಉಪಕರಣವನ್ನು ಮೊಬೈಲ್ ಆಪ್ ಮುಖಾಂತರವೂ ನಿಯಂತ್ರಿಸಬಹುದಾಗಿದೆ.ಪ್ರಸ್ತುತ…