ಚನ್ನಮ್ಮರವರು ದೇವೇಗೌಡರವರ ಕುಟುಂಬದ ಶಕ್ತಿಯಾಗಿದ್ದರು : ಪಿ ಪ್ರಶಾಂತ್ ಗೌಡ
ಪಿರಿಯಾಪಟ್ಟಣ ತಾಲೂಕು ಒಕ್ಕಲಿಗರ ಸಂಘದಲ್ಲಿ ಚನ್ನಮ್ಮರವರಿಗೆ ಶ್ರದ್ಧಾಂಜಲಿ ಸಭೆ ಪಿರಿಯಾಪಟ್ಟಣ : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮರವರು ದೇವೇಗೌಡರವರ ಕುಟುಂಬದ ಶಕ್ತಿಯಾಗಿದ್ದರು ಎಂದು ನಗರ ಪಾಲಿಕೆ ಮಾಜಿ ಸದಸ್ಯರು ಹಾಗೂ ಪಿರಿಯಾಪಟ್ಟಣ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಪಿ ಪ್ರಶಾಂತ್ ಗೌಡ ತಿಳಿಸಿದರು. ಪಟ್ಟಣದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ದಿವಂಗತ ಶ್ರೀಮತಿ ಚನ್ನಮ್ಮರವರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ರಾಜಕೀಯ ವ್ಯವಸ್ಥೆಗೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಕೊಡುಗೆಯಾಗಿ ನೀಡಿದ ಮಹಾತಾಯಿಯಾಗಿದ್ದಾರೆ ಚನ್ನಮ್ಮರವರು…