Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಅಪಾರವಾದದ್ದು : ನಟರಾಜ

ಪಿರಿಯಾಪಟ್ಟಣ : ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಅಪಾರವಾದದ್ದು ಎಂದು ಬೆಟ್ಟದಪುರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ನಟರಾಜ ಬಿ ಆರ್ ತಿಳಿಸಿದರು. ಬೆಟ್ಟದಪುರದ ಎಸ್ ಎಂ ಎಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಪ್ರಾಮಾಣಿಕತೆ ಪ್ರಯತ್ನ ಹಾಗೂ ಪರಿಶ್ರಮಗಳು ಅತ್ಯುತ್ತಮ ವ್ಯಕ್ತಿತ್ವದ ಲಕ್ಷಣಗಳಾಗಿದ್ದು ಅಂತಹ ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗುತ್ತದೆ ಪಠ್ಯ ಶಿಕ್ಷಣದ…

Read More

ಸಚಿವ ಬಿ.ನಾಗೇಂದ್ರರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವುದಕ್ಕೆ ವಿರೋಧಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು : ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸುತ್ತಿರುವ ಬಿಜೆಪಿ ನಡೆಯನ್ನು ಖಂಡಿಸಿ ಮಾಜಿ ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಜಿಲ್ಲಾ ಪಂಚಾಯತ್ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಸಚಿವ ಬಿ.ನಾಗೇಂದ್ರ ಅವರ ಭಾವಚಿತ್ರವನ್ನು ಹಿಡಿದುಕೊಂಡು ನಾನಾ ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ಮೈಸೂರು ನಗರಪಾಲಿಕೆಯ ಮಾಜಿ ಸದಸ್ಯ ಲೋಕೇಶ್ ಪಿಯಾ, ಸಚಿವ ಬಿ.ನಾಗೇಂದ್ರ ಅವರ ಪುನರ್‌ಸೇರ್ಪಡೆ ವಿರೋಧಿಸುತ್ತಿರುವ ಬಿಜೆಪಿ ನಾಯಕರು, ಮೊದಲು ತಮ್ಮ ಆಡಳಿತಾವಧಿಯ ಭ್ರಷ್ಟಾಚಾರದ ಇತಿಹಾಸವನ್ನು…

Read More

ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಶ್ರಾವಣ ಮಾಸ ಅತ್ಯಂತ ಪ್ರಶಸ್ತ; ಡಾ. ಹರ್ಷ ಪ್ರಿಯಂವದ

ಮೈಸೂರು; ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಶ್ರಾವಣ ಮಾಸ ಅತ್ಯಂತ ಪ್ರಶಸ್ತವಾದುದು ಎಂದು ಮೈಸೂರು ಉಪ ಪೊಲೀಸ್‌ಆಯುಕ್ತರಾದ ಡಾ.ಹರ್ಷ ಪ್ರಿಯಂವದ ಹೇಳಿದರು.ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದ್ದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರಾವಣ ಮಾಸ ಭಾರತೀಯರಿಗೆ ಅತ್ಯಂತ ವಿಶೇಷವಾದ ತಿಂಗಳು.ನಾನು ಮೂಲತಃ ಜಾರ್ಖಾಂಡ್‌ನವಳಾಗಿದ್ದು ಅಲ್ಲಿಯೂ ಕೂಡ ಈ ಮಾಸವನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಉತ್ಸಾಹಗಳಿಂದ ಆಚರಿಸಲಾಗುತ್ತದೆ.ಭಾರತೀಯರಲ್ಲಿ ಸಂಸ್ಕೃತಿ,…

Read More

ಹೊಸಮಠದ ಶ್ರೀಗಳು ಲಿಂಗೈಕ್ಯ : ಸುತ್ತೂರು ಶ್ರೀಮಠದಲ್ಲಿ ಸಂತಾಪ

ಮೈಸೂರು; ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಲಿಂಗೈಕ್ಯರಾದ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳಿಗೆ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಶ್ರೀ ಚಿದಾನಂದ ಸ್ವಾಮಿಗಳು ಶ್ರೀ ಹೊಸಮಠದ ಪೀಠಾಧ್ಯಕ್ಷರಾಗಿ 1982ರಂದು ನೇಮಕಗೊಂಡರು. ಶಿಶು ಶಿಕ್ಷಣದಿಂದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು.ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.ಶ್ರೀಗಳು ಉತ್ತಮ ಸಂಘಟಕರು, ಕ್ರಿಯಾಶೀಲರೂ ಆಗಿದ್ದರು.ಕೆಲ ತಿಂಗಳ ಹಿಂದೆ ಶ್ರೀ ಸಿದ್ಧಬಸವ ಸ್ವಾಮಿಗಳನ್ನು…

Read More

ಅಪರೂಪದ ನಾಣ್ಯ, ನೋಟು ಹಾಗೂ ಅಂಚೆ ಚೀಟಿಗಳ ಪ್ರದರ್ಶನ

ಮೈಸೂರು; ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ 80ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಒಂದು ದಿನದ ಅಪೂರ್ವ ನಾಣ್ಯ, ನೋಟು ಮತ್ತು ಅಂಚೆ ಚೀಟಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಡಿ.ಎಸ್. ಪ್ರತಿಮಾ ಪ್ರದರ್ಶನವನ್ನು ಉದ್ಘಾಟಿಸಿದರು. ಹುಣಸೂರಿನ ಅಪೂರ್ವ ನಾಣ್ಯ ಸಂಗ್ರಹಕಾರ ಪಿ ಕೆ ಕೇಶವಮೂರ್ತಿ ಅವರ ಸಹಕಾರದೊಂದಿಗೆ, 180ನೇ ಪ್ರದರ್ಶನದಲ್ಲಿ ಕ್ರಿಸ್ತಶಕ 1ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‌ಮಾರ್ಕ್…

Read More

ದೇಶದ ಒಳಗಿನ ಶತ್ರುಗಳ ನಿಯಂತ್ರಣವೇ ಸವಾಲು ;ಮ.ವಿ.ರಾಂಪ್ರಸಾದ್

ಮೈಸೂರು; ಭಾರತ ಜಗತ್ತಿನ ಶ್ರೇಷ್ಠ ರಾಷ್ಟçವಾಗಿ ಬದಲಾಗುತ್ತಿದೆ. ಹೊರಗಿನ ಶತ್ರುಗಳನ್ನು ಎದುರಿಸುವುದು ಕಷ್ಟವಲ್ಲ, ಆದರೆ ದೇಶದ ಒಳಗಿನ ಶತ್ರುಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲು’ ಎಂದು ಮೈಸೂರು ನಗರ ಪಾಲಿಕೆಯ ಮಾಜಿ ಸದಸ್ಯ ಮಾ.ವಿ.ರಾಮ್‌ಪ್ರಸಾದ್ ಹೇಳಿದರು.ಶುಕ್ರವಾರ ನಗರದ ಚಾಮುಂಡಿಪುರAನಲ್ಲಿ ಸ್ನೇಹ ಬಳಗದ ವತಿಯಿಂದ 79ನೇ ಸ್ವಾತಂತ್ರೊ÷್ಯÃತ್ಸವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತ್ರಿವರ್ಣ ಧ್ವಜ ವಿತರಿಸಿ ಮಾತನಾಡಿದ ಅವರು, ಹಲವಾರು ಮಹನೀಯರ ತ್ಯಾಗ, ಶ್ರಮ, ಶಾಂತಿಯುತ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ÷್ಯ ಸಿಕ್ಕಿದೆ. ಹಾಗಾಗಿ ಸ್ವಾತಂತ್ರö್ಯಕ್ಕಾಗಿ ಮಹನೀಚಿiÀÄರು ನಡೆಸಿದ ಹೋರಾಟದ ಇತಿಹಾಸವನ್ನು…

Read More

ಮನ , ಮನಗಳಲ್ಲಿ ಪುಟಿದೇಳಲಿ ದೇಶಭಕ್ತಿಯ ತರಂಗ; ಎಲ್.ಆರ್.ಮಹದೇವಸ್ವಾಮಿ

ಮೈಸೂರು; ದೇಶದ ಪ್ರತಿಯೊಬ್ಬರ ಮನ, ಮನಗಳಲ್ಲಿ ದೇಶಭಕ್ತಿಯ ತರಂಗ ಪುಟಿದೇಳಬೇಕೆಂದು ಮೈಸೂರು ಗ್ರಾಮಾಂತರ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಹೇಳಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಕರೆಯಂತೆ, ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಗುರುವಾರ ತಮ್ಮ ಪುತ್ರಿ ಜೊತೆಗೂಡಿ ಅವರ ಸ್ವಗೃಹದಲ್ಲಿ ಅತ್ಯಂತ ಹೆಮ್ಮೆ ಮತ್ತು ದೇಶಭಕ್ತಿಯ ಭಾವದಿಂದ ರಾಷ್ಟçಧ್ವಜವನ್ನು ಹಾರಿಸಿ, ದೇಶಭಕ್ತಿಯ ಗೌರವ ಮೆರೆದರು.ಬಳಿಕ ಮಾತನಾಡಿದ ಅವರು, ದೇಶದ ಮನೆ , ಮನೆಯಲ್ಲೂ ರಾಷ್ಟç ಧ್ವಜ’ ಅಭಿಯಾನ ನಡೆಯುತ್ತಿದೆ. ನಡೆಯಲೇಬೇಕು. ಪ್ರತಿಯೊಬ್ಬ…

Read More

ಸಮಾಜದ ಚಿದ್ಬೆಳಕು ಆಗಿದ್ದ ಶ್ರೀ ಚಿದಾನಂದ ಸ್ವಾಮೀಜಿ: ಎಚ್.ವಿ.ರಾಜೀವ್

ಮೈಸೂರು: ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಚಿದ್ಬೆಳಕು ಆಗಿದ್ದ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ಅತೀವ ನೋವುಂಟು ಮಾಡಿದೆ ಎಂದು ಕೆಪಿಸಿಸಿ ಸದಸ್ಯರಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸಂತಾಪ ವ್ಯಕ್ತಪಡಿಸಿದ್ದಾರೆ.ಅತ್ಯಂತ ಸರಳ, ಸಜ್ಜನಿಕೆ, ಸೌಮ್ಯ ಸ್ವಭಾವದವರಾಗಿದ್ದ ಸ್ವಾಮೀಜಿಯವರು, ತಮ್ಮ ಕ್ರಾಂತಿಕಾರಕ ಆಲೋಚನೆಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹೊಸಮಠಕ್ಕೆ ಹೊಸ ರೂಪ ನೀಡಿದ್ದರು. 1982ರಲ್ಲಿ ಶ್ರೀ ಹೊಸಮಠದ 19ನೇ ಪೀಠಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಶ್ರೀಯುತರು, ತಮ್ಮ ಗುರು…

Read More

ಬಸವ ಬಳಗದ ವತಿಯಿಂದ ಲಿಂಗೈಕ್ಯರಾದ ಶ್ರೀ ಚಿದಾನಂದ ಸ್ವಾಮೀಜಿಗೆ ಶ್ರದ್ಧಾಂಜಲಿ

ಮೈಸೂರು; ಮೈಸೂರಿನ ಶ್ರೀ ಹೊಸಮಠದ ಮಠಾಧ್ಯಕ್ಷರಾದ ಶ್ರೀ ಚಿದಾನಂದ ಸ್ವಾಮೀಜಿಗೆ ಚಾಮುಂಡಿಪುರA ಬಸವ ಬಳಗದ ವತಿಯಿಂದ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು.ನಟರಾಜ ವಿದ್ಯಾಸಂಸ್ಥೆಯ ಮೂಲಕ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿ, ಅವರ ಭವಿಷ್ಯಕ್ಕೆ ಬೆಳಕಾಗಿದ್ದ ಶ್ರೀಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ಸದಾ ಸ್ಮರಣೀಯ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.ಈ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಗಳ ಭಕ್ತ ಬೃಂದದ ಪ್ರಮುಖರಾದ ಅಂಬಳೆ ಶಿವಣ್ಣ, ಸಿ. ಸಂದೀಪ್, ಗೆಜ್ಜಗಳ್ಳಿ ಶಂಕರ್, ಕೆ.ಆರ್. ಬ್ಯಾಂಕ್…

Read More