ಅಣಬೆ ಬೇಸಾಯವು ಸ್ವಾವಲಂಬನೆ ಮತ್ತು ಹೆಚ್ಚುವರಿ ಆದಾಯಕ್ಕೆ ಉತ್ತಮ ಅವಕಾಶ: ಶಿವಕುಮಾರ
ಮೈಸೂರು: ಅಣಬೆ ಬೇಸಾಯವನ್ನು ಕೇವಲ ಕೃಷಿ ಚಟುವಟಿಕೆಯಾಗಿ ನೋಡದೆ, ಕಡಿಮೆ ಸ್ಥಳ ಮತ್ತು ಕಡಿಮೆ ಬಂಡವಾಳದಲ್ಲಿ ಆರಂಭಿಸಿ ಹೆಚ್ಚುವರಿ ಆದಾಯದ ಮೂಲವನ್ನಾಗಿ ಬೆಳೆಸಿಕೊಳ್ಳಬಹುದಾದ ಉದ್ಯಮವಾಗಿ ಪರಿಗಣಿಸಬೇಕು ಎಂದು ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಹೇಳಿದರು.ಮೈಸೂರಿನ ಹಾರ್ಟ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಉದ್ಯೋಗಕ್ಕಾಗಿ ಕಾಯುವುದಕ್ಕಿಂತ, ನಮಗೇ ಉದ್ಯೋಗ ಸೃಷ್ಟಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಮನೆಯಲ್ಲಿರುವ ಸಣ್ಣ ಜಾಗದಿಂದಲೂ ಅಣಬೆ ಬೇಸಾಯ ಆರಂಭಿಸಿ, ಅನುಭವ ಮತ್ತು…