ಜನಸ್ನೇಹಿ ಪೊಲೀಸ್‌ಗೆ ಜನಸಾಗರದ ಬೀಳ್ಕೊಡುಗೆ: ಎಎಸ್‌ಐ ಬಿ ವಿಶ್ವ ರವರ ಸಾರ್ಥಕ ನಿವೃತ್ತಿ
ಚಾಮರಾಜನಗರ, ಜೂ. 30: 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಸಮಾನತೆಯ ಸಂದೇಶ ಸಾರಿದಂತೆ, 21ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಡಿ 33 ವರ್ಷಗಳ ಕಾಲ ನಿಷ್ಕಳಂಕ, ಜನಸ್ನೇಹಿ ಸೇವೆ ಸಲ್ಲಿಸಿದ ಸಹಾಯಕ ಉಪನಿರೀಕ್ಷಕ ಬಿ. ವಿಶ್ವ ಅವರು ಇಂದು ಪೊಲೀಸ್ ಇಲಾಖೆಯಿಂದ ವಯೋನಿವೃತ್ತಿ ಹೊಂದಿದರು. ನಗರದಲ್ಲಿ ಹಿತೈಷಿಗಳ ಬಳಗದಿಂದ ವಿರಕ್ತಮಠದ ಆವರಣದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭವು ಸರ್ವಧರ್ಮ ಸಮನ್ವಯತೆಯ ವೇದಿಕೆಯಾಯಿತು. ಅಧಿಕಾರ ಅವಧಿ ಮುಗಿದ…