Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ನಂದಿನಿ ಹಾಲಿನ ದರ ಹೆಚ್ಚಳದ ನಿರ್ಧಾರ ಕೈ ಬಿಡಲು ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹ

ಮೈಸೂರು; ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಏರಿಕೆ ಮಾಡುವ ಪ್ರಸ್ತಾವನೆವನ್ನು ಕೂಡಲೇ ಕೈಬಿಡಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಈಗಾಗಲೇ ಅನೇಕ ದಿನಸಿ ಪದಾರ್ಥಗಳ ದರಗಳು ಗಗನಕ್ಕೇರಿದ್ದು, ಜನಸಾಮಾನ್ಯರು ಮತ್ತು ನಮ್ಮಂತಹ ಸಣ್ಣ ಹೋಟೆಲ್ ಉದ್ಯಮಿಗಳು ಜೀವನ ಮತ್ತು ಉದ್ಯಮ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಕಳೆದ ವರ್ಷ ಹಾಲಿನ ಬೆಲೆ ಪರಿಷ್ಕರಿಸಲಾಗಿದ್ದು,ಕಳೆದ ತಿಂಗಳು ಎರಡು ಸಲ ನಂದಿನಿ ತುಪ್ಪ ಶೇ೧೦% ರಷ್ಟು ಹೆಚ್ಚಿಸಲಾಗಿದೆ,…

Read More

ರೈತರ ಕೃಷಿ ಸಾಲ ಮನ್ನಕ್ಕಾಗಿ ಅ. ೧೨ರಂದು ರೈತರಿಂದ ಬೃಹತ್ ಪ್ರತಿಭಟನಾ ಧರಣಿ; ಕುರುಬೂರು ಶಾಂತಕುಮಾರ್

ನಂಜನಗೂಡು ; ರಾಜ್ಯದಲ್ಲಿ ೨೧೭ ತಾಲೂಕು ಬರಗಾಲಕ್ಕೆ ತುತ್ತಾಗಿವೆ. ೧೯ ಲಕ್ಷ ಹೆಕ್ಬೇರ್ ಬೆಳೆನಾಶ. ೨೦ ಸಾವಿರ ಕೋಟಿ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆದ್ದರಿಂದ ಸರ್ಕಾರ ನ್ಯಾಯಯುತ ಪರಿಹಾರ ನೀಡಬೇಕು ಎಂದು ಅ.೧೨ ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ರೈತರ ಕೃಷಿ ಸಾಲ ಮನ್ನಾ ಆಗಬೇಕು ಗ್ರಾಮೀಣ…

Read More

ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ರಾಜೇಂದ್ರ ಶ್ರೀಗಳ ಕೊಡುಗೆ ಅನನ್ಯ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಪಿರಿಯಾಪಟ್ಟಣ: ಶಿಕ್ಷಣ, ದಾಸೋಹ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕೊಡುಗೆ ಅಪಾರ ಮತ್ತು ಅವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು ಎಂದು ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಿಸಿದರು. ತಾಲೂಕಿನ ಬೆಟ್ಟದಪುರ ಶ್ರೀ ಸಲೀಲಾಖ್ಯ ಮಠ ಮತ್ತು ಶ್ರೀ ಕನ್ನಡ ಮಠದ ಆವರಣದಲ್ಲಿ ಮೈಸೂರಿನ -ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ ವತಿಯಿಂದ ಆಯೋಜಿಸಿದ್ದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ…

Read More

ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು : ಯೋಜನಾಧಿಕಾರಿ ರವಿ 

ಪಿರಿಯಾಪಟ್ಟಣ : ಮಹಿಳೆ ಅಬಲೆಯಲ್ಲ ಸಬಲೇ ಈ ಮಾತು ಸಾಕಾರವಾಗಬೇಕಾದರೆ ಆಕೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ರವಿ ತಿಳಿಸಿದರು.  ತಾಲೂಕಿನ ಕೆ. ಹರಳಹಳ್ಳಿ ಗ್ರಾಮದಲ್ಲಿ ಮಾದೇಶ್ವರ ಜ್ಞಾನವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದ ಅವರು ಗ್ರಾಮೀಣ ಭಾಗದ ಕೆಲ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಅವರು ನಮ್ಮ ಸಂಸ್ಥೆಯ ಜ್ಞಾನವಿಕಾಸ ಕೇಂದ್ರದ ಸದಸ್ಯರಾದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಅವರ ಜ್ಞಾನ ವೃದ್ಧಿಯಾಗಿ ಬುದ್ಧಿವಂತಿಕೆ ಹೆಚ್ಚುತ್ತದೆ.  ಪ್ರಚಲಿತ ವಿದ್ಯಮಾನಗಳ ಅರಿವು…

Read More

ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಿಸುವುದಕ್ಕೆ ಸ್ಪಷ್ಟ ವಿರೋಧವಿದೆ; ಸಂಸದ ಯದುವೀರ್

ಮೈಸೂರು; ಕೆಲ ಸಂಘಟನೆಗಳು ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಮಾಡುವುದಕ್ಕೆ ತಮ್ಮ ಸ್ಪಷ್ಟ ವಿರೋಧವಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿAದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಕೇವಲ ಆರಾಧನೆಯಾಗಿ, ಯಾರ ಭಾವನೆಗೂ ಧಕ್ಕೆ ಆಗದ ರೀತಿಯಲ್ಲಿ ಆಚರಿಸಿದರೆ, ನಮ್ಮ ವಿರೋಧವಿಲ್ಲ. ಆದರೆ ಇದರ ಹಿಂದೆ ಸೈದ್ಧಾಂತಿಕ ಹೋರಾಟವಿದ್ದರೆ ಅದನ್ನು ಮಾಡಬಾರದು” ಎಂದು ಹೇಳಿದರು. ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸಿರುವುದು ಸರಿಯಲ್ಲ,…

Read More

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು ತವರೂರಿಗೆ ಆಗಮಿಸಿದ ಗಾಲ್ಫರ್ ಪ್ರಣವಿ ಅರಸ್‌ಗೆ ಭವ್ಯ ಸ್ವಾಗತ

ಮೈಸೂರು: ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದು ವಿಜಯ ಪತಾಕೆ ಹಾರಿಸಿ ಹೊಸ ಇತಿಹಾಸ ನಿರ್ಮಿಸಿರುವ ಗಾಲ್ಫರ್ ಪ್ರಣವಿ ಅರಸ್ ಅವರು ತಮ್ಮ ತವರೂರಾದ ಮೈಸೂರಿಗೆ ಬುಧವಾರ ಆಗಮಿಸಿದಾಗ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಯಿತು.ಪದಕ ಗೆದ್ದ ಬಳಿಕ ಮೈಸೂರಿಗೆ ಆಗಮಿಸಿದ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ತೆರೆದ ಜೀಪಿನಲ್ಲಿ ಅವರನ್ನು ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರಣವಿ ಅರಸ್ ಅವರನ್ನು ಕ್ರೀಡಾಭಿಮಾನಿಗಳು ಹಾಗೂ ಕುಟುಂಬಸ್ಥರು ಸಂಭ್ರಮದಿAದ…

Read More

ಉನ್ನತ ಶಿಕ್ಷಣ ಸಚಿವರಿಂದ ವಿವಿಧ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನೆ

ಮೈಸೂರು; ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಬುಧವಾರ ನಗರದ ಮೈಸೂರು ವಿವಿಯ ಕ್ರಾಫರ್ಡ್ ಹಾಲ್ ನಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನೆ ನಡೆಸಿದರು.ಮೈಸೂರು ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ, ಹಾಸನ ವಿಶ್ವವಿದ್ಯಾಲಯ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯಗಳ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.ಮೈಸೂರಿನಿAದ ವಿಶ್ವವಿದ್ಯಾಲಯಗಳು ಬೇರ್ಪಟ್ಟ ನಂತರ ಚಾಮರಾಜನಗರ, ಮಂಡ್ಯ, ಹಾಸನ ವಿಶ್ವವಿದ್ಯಾಲಯಗಳು ಆಯಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸ್ಥಳ ವಿಸ್ತೀರ್ಣ, ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡರು.ಕಾರ್ಯನಿರ್ವಹಿಸುತ್ತಿರುವ ಖಾಯಂ ಉಪನ್ಯಾಸಕರು, ಖಾಲಿ ಇರುವ ಹುದ್ದೆ, ಅತಿಥಿ ಉಪನ್ಯಸಕರು, ಹೊರಗುತ್ತಿಗೆ…

Read More

ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯರಿಂದ ಮೈಸೂರು ದಸರಾ ಮಹೋತ್ಸವ: ಮೂಲಸೌಕರ್ಯ, ಕಾಮಗಾರಿಗಳ ಪರಿಶೀಲನೆ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕöÈತಿಕ ನಗರಿ ಸಜ್ಜಾಗುತ್ತಿದ್ದು, ಹಬ್ಬದ ಯಶಸ್ವಿ ಆಯೋಜನೆ ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳ ಜಂಟಿ ಸ್ಥಳ ಪರಿಶೀಲನೆಯನ್ನು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಬುಧವಾರ ನಡೆಸಿದರು.ನಗರದ ಮಹಾರಾಜ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವ ‘ಆಹಾರ ಮೇಳ’ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ , ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಶುದ್ಧ ಕುಡಿಯುವ ನೀರು ಹಾಗೂ ತೀವ್ರ ಬಿಸಿಲಿನಿಂದ…

Read More

ಗಜಪಡೆ, ಅಶ್ವದಳಕ್ಕೆ ಮೊದಲ ಹಂತದ ಸಿಡಿ ಮದ್ದಿನ ತಾಲೀಮು

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಗಜಪಡೆ ಹಾಗೂ ಪೊಲೀಸ್ ಅಶ್ವದಳಕ್ಕೆ ಮೊದಲ ಹಂತದ ಸಿಡಿಮದ್ದಿನ ತಾಲೀಮು ನಡೆಸಲಾಯಿತು.ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ಗಜಪಡೆಯನ್ನು ಸಾಲಾಗಿ ನಿಲ್ಲಿಸಿ, ನಗರ ಸಶಸ್ತç ಮೀಸಲು ಪಡೆಯ ಸಿಬ್ಬಂದಿಗಳು ಸಾಲಾಗಿ ನಿಲ್ಲಿಸಿಲಾಗಿದ್ದ ೭ ಫಿರಂಗಿ ಗಾಡಿಗಳಲ್ಲಿದ್ದ ಪಿರಂಗಿಗಳಿಗೆ ತುಂಬಿದ್ದ ಮದ್ದಿಗೆ ಬೆಂಕಿ ಕೊಡುವ ಮೂಲಕ ೨೧ ಸುತ್ತು ಕುಶಾಲ ತೋಪುಗಳನ್ನು ಸಿಡಿಸಿ ತಾಲೀಮು ನಡೆಸಿದರು.ತಾಲೀಮಿನಲ್ಲಿ ಅಶ್ವದಳದ ೪೩ ಕುದುರೆಗಳು ಹಾಗೂ ದಸರಾ ಗಜಪಡೆಯ ೧೩ ಆನೆಗಳಾದ…

Read More

150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಿ ಎಂ ಪ್ರಸನ್ನ ಬೃಹತ್ ಪಾದಯಾತ್ರೆ 

ಪಿರಿಯಾಪಟ್ಟಣ: 150 ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ನೇತೃತ್ವದಲ್ಲಿ ಬೆಟ್ಟದಪುರದಿಂದ ಪಿರಿಯಾಪಟ್ಟಣದ ತಾಲ್ಲೂಕು ಆಡಳಿತ ಭವನದ ವರೆಗೆ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ರಾಜ್ಯದಲ್ಲಿ ಆಗುತ್ತಿರುವ ರೈತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕಾರಣ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷವಾಗಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆ ಒಳಪಡಿಸದೆ…

Read More